Dark Light

Blog Post

Namma Bagalkot > News > Bagalkot > Narega Festival in Kisarooru: ಕಿಸರೂರ ಗ್ರಾಮದಲ್ಲಿ ನರೇಗೋತ್ಸವ ಕಾರ್ಯಕ್ರಮ
NREGA festival

Narega Festival in Kisarooru: ಕಿಸರೂರ ಗ್ರಾಮದಲ್ಲಿ ನರೇಗೋತ್ಸವ ಕಾರ್ಯಕ್ರಮ

NREGA festival

Zila Panchayat Organised NREGA  Festival in Kisarooru

ಬಾಗಲಕೋಟೆ: ನರೇಗಾ ಯೋಜನೆಯಿಂದ ಗ್ರಾಮದ ಸಮಗ್ರ ಅಭಿವೃದ್ದಿ ಸಾಧ್ಯವೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಹೇಳಿದರು.
ತಾಲೂಕಿನ ಭಗವತಿ ಗ್ರಾಮ ಪಂಚಾಯತಿ ಕಿರಸೂರ ಗ್ರಾಮದ ಕೆರೆ ಆವರಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ನರೇಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು, ಇದರಿಂದ ಬದು ನಿರ್ಮಾಣ, ಕರೆ ಹೂಳೆತ್ತುವದರ ಜೊತೆಗೆ ಪುಟ್‌ಪಾತ್ ನಿರ್ಮಾಣ, ಸಸಿ ಬೆಳೆಸುವುದು, ಕೋಳಿ, ಏರೆಹುಳು ಶೆಡ್ ನಿರ್ಮಾಣದಂತ ಕಾರ್ಯಗಳನ್ನು ಮಾಡಬಹುದಾಗಿದೆ. ನರೇಗಾದಡಿ ಕೆಲಸ ಮಾಡುವವರಿಗೆ ಪ್ರಧಾನಮಂತ್ರಿ ಜೀವನ್ ಸುರಕ್ಷಾ ವಿಮಾ ಯೋಜನೆ, ಜಲಸಂಜೀವಿನಿ ಮತ್ತು ಇ-ಶ್ರಮ ಕಾರ್ಡ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೇ ಕೆಲಸದ ಸಮಯದಲ್ಲಿ ಗಾಯಗೊಂಡವರಿಗೆ, ಅಪಘಾತ ಉಂಟಾದಲ್ಲಿ ವೈದ್ಯಕೀಯ ವೆಚ್ಚ ಸಹ ಭರಿಸಲಾಗುತ್ತಿದೆ ಎಂದರು.
ಕೂಲಿ ಮಾಡುವ ಕಾಯಕದಲ್ಲಿ ತೊಡಗಿದ ವ್ಯಕ್ತಿ ಮರಣಹೊಂದಿದ ಘಟನೆ ನಡೆದಲ್ಲಿ ಪರಿಹಾರ ನೀಡಲಾಗುತ್ತದೆ. ಕಳೆದ ವರ್ಷ ನರೇಗಾದಲ್ಲಿ ಉತ್ತಮ ಕೆಲಸ ಮಾಡಿದರ ಫಲವಾಗಿ, ಸಮರ್ಪಕ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಪ್ರವೃತ್ತಿ ಹೀಗೆ ಮುಂದುವರೆಯುವಂತಾಗಬೇಕು. ಕೆಲಸದ ಜೊತೆಗೆ ತಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮಾತನಾಡಿ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ಬದಲಾವಣೆಯಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿ ಪ್ರತಿ ದಿನಕ್ಕೆ 289 ರೂ.ಗಳಿಂದ 309ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ವಿಮೆ, ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ 100 ದಿನ ಪೂರೈಸಿದ ಕುಟುಂಬ, ವ್ಯಕ್ತಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಹಮ್ಮಿಕೊಂಡು ಆರೋಗ್ಯ ತಪಾಸಣೆ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಗ್ರಾಮ ಪಂಚಾಯತ ಅಧ್ಯಕ್ಷೆ ಭೀಮವ್ವ ಮಾದರ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಸುನಿತಾ ಅಂಕೋಲಿ, ಜಿಲ್ಲಾ ಮಾಹಿತಿ ಸಂಯೋಜಕ ಅಜಯ ಸೂಳಿಕೇರಿ, ತಾಲೂಕಾ ಮಾಹಿತಿ ಸಂಯೋಜಕ ಈರಣ್ಣ ಮಾಸ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *