Dark Light

Blog Post

Namma Bagalkot > News > Art & Entertainment > Madiwala Machideva: ಬಟ್ಟೆಯ ಜೊತೆ ಸಮಾಜ ಶುಚಿಗೊಳಿಸಿದವರು ಮಾಚಿದೇವರು

Madiwala Machideva: ಬಟ್ಟೆಯ ಜೊತೆ ಸಮಾಜ ಶುಚಿಗೊಳಿಸಿದವರು ಮಾಚಿದೇವರು

Madivala machideva cleaned the society just like cleaning the cloths

ಬಾಗಲಕೋಟೆ: ಹನ್ನೆರಡನೆಯ ಶತಮಾನ ಶರಣರ ಯುಗವಾಗಿದ್ದು, ಅಂತಹ ಶರಣರ ಸಾಲಿನಲ್ಲಿ ಗಣಚಾರಿ ಎನಿಸಿಕೊಂಡಿದ್ದ ಮಡಿವಾಳ ಮಾಚಿದೇವ ಬಟ್ಟೆಯನ್ನು ಶುಚಿಗೊಳಿಸುವ ಕಾಯಕದ ಜೊತೆಗೆ ಸಮಾಜ ಸುಧಾರಣೆ ಕಾರ್ಯ ಮಾಡಿದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್‌ಪೂಜಾರ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶರಣ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರು ನೇರ, ನಿಷ್ಠ ಜೀವಿಗಳಾಗಿದ್ದು, ಕಡು ಬಡತನದಲ್ಲೂ ಅರಸನ ಜೊತೆ ಕದನಕ್ಕೆ ಇಳಿದವರು. ಹಣದಲ್ಲಿ ಸಿರಿವಂತರಲ್ಲದ್ದಿದ್ದರೂ ಗುಣದಲ್ಲಿ ಗುಣವಂತರು ಎಂದರು.
ಮಾನವ ಸಮಾಜದಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಗುರುತಿಸಿಕೊಂಡು ಬಂದಿದ್ದು, ಮಾನವನ ಜೀವನ ಸಾರ್ಥಕ ಮಾಡಿಕೊಳ್ಳುವ ಅನೇಕ ವಿಚಾರಗಳಿಂದ ಶರಣರು ಹೊರ ಹೊಮ್ಮಿದ್ದಾರೆ. ಅಂತವರಲ್ಲಿ ಮಾಚೀದೇವರು ತಮ್ಮ ಬರಹಗಳ ಮೂಲಕ ಸಮಾಜಕ್ಕೆ ಉತ್ತಮ ಕೋಡುಗೆಯನ್ನು ನೀಡಿದ್ದಾರೆ. ಮಾನವೀತೆಯ ಕಲ್ಯಾಣಕ್ಕಾಗಿ ಶ್ರಮಿಸಿದವರು. ಮಡಿವಾಳ ಮಾಚಿದೇವರು ದೇಶಕ್ಕೆ ಬೆಳಕಾಗಿದ್ದು, ನಮ್ಮಲ್ಲಿ ಜನಿಸಿದ್ದು, ನಮ್ಮ ಪುಣ್ಯ. ಮಡಿವಾಳರು ಎಂದರೆ ಬಟ್ಟೆ ತೊಳೆಯುವರು ಮಾತ್ರವಲ್ಲ, ಬಟ್ಟೆಯ ಮೂಲಕ ಮನಸ್ಸನ್ನು ಶುದ್ಧ ಮಾಡಿದವರು. ಎಲ್ಲರ ಪಾಲಿಗೆ ಬೆಳಕಾದ ಮಾಚಿದೇವ ಅವರು, ಇವತ್ತಿಗೂ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಆಯುಷ ಆರೋಗ್ಯಾಧಿಕಾರಿ ಡಾ.ಸಂಗಮೇಶ ಕಲಹಾಳ ಮಾತನಾಡಿ ಬಸವನ ಮೂರ್ತಿ ಜ್ಞಾನಕ್ಕೆ ಮೂಲ ಜಗತ್ತಿನ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ಒಬ್ಬ ವ್ಯಕ್ತಿ ಪರಿಪೂರ್ಣವಾಗಿದ್ದರೆ, ಇಡೀ ವಿಶ್ವವೇ ಪರಿಪೂರ್ಣವಾಗಿರುತ್ತದೆ. ಆದ್ಯಾತ್ಮಿಕ ಶಕ್ತಿ ಮನೋಧರ್ಮ, ಆತ್ಮಶಕ್ತಿ ಮೂರು ಇರಬೇಕು. ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳೊಂದಿಗೆ ವಿಶ್ವಾಸವನ್ನು ಗಳಿಸಿಕೋಳ್ಳಣ ಎಂದರು. ವಚನಗಳನ್ನು ಕೇಳಿಸಿಕೊಳ್ಳುವುದು ಅಷ್ಟೇ ಅಲ್ಲ ಅದನ್ನು ಪಾಲಿಸಬೇಕು, ಜ್ಞಾನ ಮುಚ್ಚಿಟ್ಟಷ್ಟು ಹಾಳಾಗುತ್ತದೆ. ತೆರೆದಿಷ್ಟು ಉಳಿಯುತ್ತದೆ ಎಂದರು. ನಮ್ಮ ಮಕ್ಕಳಿಗೆ ಶಿಕ್ಷಣ ನೀಡೋಣ ಸಮಾಜದಲ್ಲಿ ಉತ್ತಮ ನಾಯಕರನ್ನಾಗಿ ಮಾಡೋಣ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ ಮಡಿವಾಳ ಮಾಚಿದೇವರು ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಿಟ್ಟು, ಕೊಡುಗೆಯನ್ನು ನೀಡಿದವರು. ಹೆಣ್ಣು ಗಂಡು, ಮೇಲು-ಕೀಳು ಬಿಟ್ಟು ಸಮಾನತೆಯಿಂದ ಸಮಾಜದಲ್ಲಿ ಬದುಕುವುದನ್ನು ರೂಡಿಸಿದ್ದಾರೆ. ಅವರ ಆದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶನಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣ ಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *