Dark Light

Blog Post

Namma Bagalkot > News > Business & Technology > See Which Works are Sanctioned in Your Area Right on your Mobile: ನಿಮ್ಮೂರಿನಲ್ಲಿ ಯಾವ ಯಾವ ಕೆಲಸ ಮಂಜೂರಾಗಿದೆ ಎಂದು ಮೊಬೈಲ್ನಲ್ಲಿಯೇ ನೋಡಿ

See Which Works are Sanctioned in Your Area Right on your Mobile: ನಿಮ್ಮೂರಿನಲ್ಲಿ ಯಾವ ಯಾವ ಕೆಲಸ ಮಂಜೂರಾಗಿದೆ ಎಂದು ಮೊಬೈಲ್ನಲ್ಲಿಯೇ ನೋಡಿ

See which jobs are sanctioned in your area right on your mobile
ನಮ್ಮೂರಿನಲ್ಲಿ ಯಾವ ಯಾವ ಕಾಮಗಾರಿಗಳ ಕೆಲಸಗಳು ಪ್ರಗತಿಯಲ್ಲಿವೆ? ಯಾವ ಕಾಮಗಾರಿಗಳ ಕೆಲಸ ಮುಗಿದಿದೆ? ಯಾವ ಕಾಮಗಾರಿಗೆ ಎಷ್ಟು ಹಣ ಮಂಜೂರಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು
ಸಾರ್ವಜನಿಕರು ತಮ್ಮ ಗ್ರಾಮದಲ್ಲಿ ಯಾವ ಯಾವ ಕಾಮಗಾರಿಗಳು ಸ್ಯಾಂಕ್ಷನ್ ಆಗಿವೆ? ಏನೇನು ಕಾಮಗಾರಿಗಳು ನಡೆಯಲಿವೆ ಎಂಬುದರ ಕುರಿತು ಚೆಕ್ ಮಾಡಲು ಈ
https://mahitikanaja.karnataka.gov.in/PTBank/PTDetailsOfWorksCapturedVillage?ServiceId=2065&Type=TABLE&DepartmentId=2065
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಾರ್ವಜನಿಕ ಮಾಹಿತಿ ವ್ಯವಸ್ಥೆಯ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸಾರ್ವಜನಿಕರು ತಾವು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ತಮ್ಮ ತಾಲೂಕು ಯಾವುದೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಅಂದರೆ ನಿಮ್ಮೂರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.
ಸಾರ್ವಜನಿಕರಿಗೆ ತಮ್ಮೂರಿನಲ್ಲಿ ರಸ್ತೆ ಕಾಮಗಾರಿಗಳು ಅಂದರೆ ಯಾವ ಓಣಿಯಿಂದ ಯಾವ ಓಣಿಯವರೆಗೆ ಸಿಸಿ ರಸ್ತೆಗಳ ಕಾಮಗಾರಿ ನಡೆದಿದೆ ಹಾಗೂ ಕಾಮಗಾರಿ ಮಂಜೂರಾತಿ ಸಿಕ್ಕಿದೆ. ಕೆಲಸದ ಪ್ರಗತಿ ಏನೇನು ನಡೆದಿದೆ ಎಂಬ ಮಾಹಿತಿ ಸಿಗುತ್ತದೆ. ಆ ಕಾಮಗಾರಿ ಎಷ್ಟು ಲಕ್ಷ ರೂಪಾಯಿಯದ್ದಾಗಿದೆ. ಹಾಗೂ ಕಾಮಗಾರಿಯ ಗುತ್ತಿಗೆದಾರರ ಹೆಸರು, ಅದಕ್ಕೆ ಯಾವ ಅಧಿಕಾರಿ ಮಂಜೂರಾತಿ ನೀಡಿದ್ದಾರೆ ಎಂಬುದರ ಮಾಹಿತಿ ಇರುತ್ತದೆ. ನಿಮ್ಮೂರಿನಲ್ಲಿ ಪೈಪ್ ಲೈನ್ ಕೆಲಸದ ಕಾಮಗಾರಿ ನಡೆಯುತ್ತಿದ್ದರೆ ಎಲ್ಲಿಂದ ಎಲ್ಲಿಯವರೆಗೆ ನಡೆಯುತ್ತಿದೆ. ಈ ಕಾಮಗಾರಿಗೆ ಎಷ್ಟು ಹಣ ಮಂಜೂರಾಗಿದೆ ಹಾಗೂ ಕೆಲಸ ಆರಂಭವಾಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು. ಚರಂಡಿ ಕೆಲಸಗಳು ನಡೆಯುತ್ತಿದ್ದರೆ ಅದಕ್ಕೆ ಎಷ್ಟು ಹಣ ಮಂಜೂರಾಗಿದೆ ಹಾಗೂ ಕಾಮಗಾರಿಯ ಸ್ಟೇಟಸ್ ನ್ನು ಸಹ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ನೀರು ಸರಬರಾಜು ಪೈಪ್ ಲೈನ್, ಬೋರ್ವೆಲ್ ದುರಸ್ತಿ ಕೆಲಗಳಿಸಿದ್ದರೂ ಇಲ್ಲಿ ತೋರಿಸಲಾಗಿರುತ್ತದೆ. ಇದರೊಂದಿಗೆ ವಿದ್ಯುತ್ ಬಲ್ಬ್ ಗಳ ಅಳಡವಿಕೆ, ವಿದ್ಯುತ್ ಕೆಲಸ ಕಾಮಗಾರಿಗಳು ಹಾಗೂ ಊರಲ್ಲಿ ದೇವಸ್ಥಾನವಿದ್ದರೆ ದೇವಸ್ಥಾನದ ಸುತ್ತಮುತ್ತಲು ಸ್ವಚ್ಛಗೊಳಿಸುವ ಕಾಮಗಾರಿ ಸೇರಿದಂತೆ ಪಂಚಾಯತಿ ಕಡೆಯಿಂದ ನಡೆಯುವ ಸರ್ವ ಮಾಹಿತಿಯೂ ಸಾರ್ವಜನಿಕರಿಗೆ ಮೊಬೈಲ್ ನಲ್ಲಿ ಕುಳಿತಲ್ಲಿಯೇ ಸಿಗುತ್ತದೆ.

Leave a comment

Your email address will not be published. Required fields are marked *