Dark Light

Blog Post

Namma Bagalkot > News > Agriculture and Farming > Practice Organic farming- MP Gaddigowdar: ಸಾವಯವ ಕೃಷಿ ಪದ್ದತಿ ಅನುಸರಿಸಿ- ಸಂಸದ ಗದ್ದಿಗೌಡರ

Practice Organic farming- MP Gaddigowdar: ಸಾವಯವ ಕೃಷಿ ಪದ್ದತಿ ಅನುಸರಿಸಿ- ಸಂಸದ ಗದ್ದಿಗೌಡರ

Practice Organic farming- MP Gaddigowdar


ಬಾಗಲಕೋಟೆ: ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುವ ಮೂಲಕ ಉತ್ತಮವಾದ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಸಾದ್ಯ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ತೋಟಗಾರಿಕೆ ವಿವಿಯ ಸಭಾಂಗಣದಲ್ಲಿ ಗುರುವಾರ ಸಾವಯವ ಕೃಷಿಗಾಗಿ ತೋಟಗಾರಿಕೆ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುತ್ತಿರುವ ರಾಜ್ಯ ಸಿಕ್ಕಿಂ ಆಗಿದ್ದು, ಅಲ್ಲಿನ ಬೆಳೆ, ಆಹಾರ ಧಾನ್ಯ, ತರಕಾರಿ, ಹಣ್ಣು-ಹಂಪಲ ರುಚಿ, ಪ್ರೋಟೀನ್ ಹೊಂದಿರುವುದನ್ನು ಕಾಣುತ್ತಿದ್ದೇವೆ. ಅವರ ಮಾದರಿಯನ್ನು ನಾವು ಅಳವಡಿಸಿಕೊಳ್ಳುವುದ ಅಗತ್ಯವಾಗಿದೆ ಎಂದರು.
ತೋಟಗಾರಿಕೆಯಲ್ಲಿ ವಿವಿಧ ಹಣ್ಣು-ಹಂಪಲ, ತರಕಾರಿ, ಮಸಾಲ ಪದಾರ್ಥ, ಹೂಗಳನ್ನು ಸಾವಯುವ ಕೃಷಿ ಪದ್ದಿಯಲ್ಲಿಯೇ ಬೆಳೆಯಬೇಕು. ತೋಟಗಾರಿಕೆಯಲ್ಲಿ ಹೊಸ ಹೊಸ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿ, ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡಾಗ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. ವಿವಿಧ ಬೆಳೆಗಳ ಬಗ್ಗೆ ರೈತರಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕು. ತೋವಿವಿಯಲ್ಲಿ ಹೊರತಂದ ಸಂಶೋಧನೆ ಮೂಲಕ ರೈತರಿಗೆ ಲಾಭವಾಗುವಂತೆ ಆಗಬೇಕು ಎಂದರು.
ವಿವಿಧ ಬೆಳೆಗಳ ಬಗ್ಗೆ ರೈತರಿಗೆ ತರಬೇತಿ ನೀಡಬೇಕು. ರೈತರ ಮನೆ ಬಾಗಿಲೆಗೆ ಮಾಹಿತಿ ತಲುಪಿಸಿ ಫಲವತ್ತಾದ ಭೂಮಿ, ಹವಾಮಾನ ಹಾಗೂ ನೀರಾವರಿ ವ್ಯವಸ್ಥೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವಂತಾಗಬೇಕು. ಸಣ್ಣ ಪುಟ್ಟ ರೈತರ ಮನಸ್ಥಿತಿ ಬದಲಾವಣೆಗೊಳಿಸಿ ಸಾವಯವ ಪದ್ದತಿಯತ್ತ ಕೊಂಡೊಯ್ದು ಅವರ ಜೀವನ ಮಟ್ಟ ಸುಧಾರಿಸಬೇಕು. ಇದಕ್ಕಾಗಿ ತೋವಿವಿಯ ಸಂಶೋಧಕರು, ಅಧಿಕಾರಿಗಳು ಶ್ರಮಿಸುವ ಅಗತ್ಯವಿದೆ ಎಂದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಾರಂಭದಿಂದ ಇಲ್ಲಿಯವರೆಗೆ ಶಿಕ್ಷಣದ ಜೊತೆಗೆ ಸಂಶೋಧನೆಚಿiÀು ಮೂಲಕ ವಿವಿಯ ತಳಿಗಳನ್ನು ಹೊರತಂದು ರೈತರ ಆದಾಯ ಹೆಚ್ಚಳಕ್ಕೆ ಶ್ರಮಿಸುತ್ತಿದೆ. ಪ್ರಕತಿ ವಿಕೋಪದಿಂದ ಬೆಳೆ ನಾಶವಾಗಿ ರೈತರ ನಷ್ಟ ಅನುಭವಿಸುತ್ತಿದ್ದು, ಶಿಕ್ಷಣದ ಜೊತೆಗೆ ಸಂಶೋಧನೆ ಹೆಚ್ಚು ಒತ್ತು ಕೊಡಬೇಕು. ಸಾವಯವ ಕೃಷಿ ಹೆಚ್ಚಿನ ಒತ್ತು ನೀಡಲು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ತೋವಿವಿಯು ರೈತರಿಗೆ ಮಾರ್ಗದರ್ಶನ ಜೊತೆಗೆ ಆದಾಯ ನೀಡುವ ಹಣ್ಣು ಬೆಳೆಗಳತ್ತ ಬೆಳೆಯಲು ಮುಂದಾಗುವಂತೆ ಮಾಡಿ ಅವರ ಆದಾಯ ಹೆಚ್ಚಿಸುವ ಕಾರ್ಯವಾಗಬೇಕು. ರೈತರಿಗೆ ಕಾಲಕಾಲಕ್ಕೆ ಮಾಹಿತಿ ದೊರೆಯಬೇಕು. ಕಲಿಕೆಯ ಜೊತೆಗೆ ತೋಟಗಾರಿಕೆ ಪ್ರದೇಶದತ್ತ ಹೋಗುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ, ನಬಾರ್ಡನ ಚೀಪ್ ಜನರಲ್ ಮ್ಯಾನೇಜರ ಟಿ.ರಮೇಶ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ.ಎಂ.ಶಿವಮೂರ್ತಿ, ಬಿ.ಸುಮಿತ್ರಾದೇವಿ, ಎನ್.ಕೆ.ಹೆಗಡೆ, ಡಾ.ರವೀಂದ್ರ ಮುಲಗೆ, ಡಾ.ಟಿ.ಬಿ.ಅಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿವಿಧ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ಉತ್ತಮ ಸಾಧನೆ ಮಾಡಿದ 10 ಜನ ರೈತರಿಗೆ ಪ್ರಸಶ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂಡನಹಳ್ಳಿ ಗ್ರಾಮದ ನಂಜುಡಪ್ಪ ತವ್ಮ್ಮಯ್ಯಪ್ಪ, ಬೆಂಗಳೂರು ನಗರದ ಅರೆಕೆರೆ ಗ್ರಾಮದ ಸಿ.ಎಲ್.ಎನ್.ಗೌಡ, ಮಂಡ್ಯದ ಜಿಲ್ಲೆ ಆಲೇನಹಳ್ಳಿಯ ಪ್ರತಾಪ್ ಎಸ್.ಪಿ.ಬಿನ್ ಪುಟ್ಟರಾಜು, ಚಾಮರಾಜನಗರ ಜಿಲ್ಲೆ ದೊಡ್ಡತುಪ್ಪೂರಿನ ಶಶಿಕುಮಾರ ಎಂ.ಬಿನ್ ಮಹದೇವಪ್ಪ, ಚಿಕ್ಕಬಳ್ಳಾಪೂರ ಜಿಲ್ಲೆ ದಿನ್ನೇಮೇಲಿನಹಳ್ಳಿಯ ಪಿ.ಲಕ್ಷ್ಮಣ ರೆಡ್ಡಿ ತೋತಲಪ್ಪ, ಕೋಲಾರ ಜಿಲ್ಲೆ ಬೆತ್ತನ ಗ್ರಾಮದ ರಘುಪತಿ ಆರ್., ಹಾಸನ ಜಿಲ್ಲೆ ಉಣ್ಣೇನಹಳ್ಳಿ ಗ್ರಾಮದ ನಾಗವರ್ಮ ಯು.ಎಂ, ತುಮಕೂರು ಜಿಲ್ಲೆ ಚಂಬೇನಹಳ್ಳಿಯ ಈರಪ್ಪ, ರಾಮನಗರ ಜಿಲ್ಲೆ ಕಗ್ಗಲಹಳ್ಳಿಯ ಶಾಚಿತಮ್ಮ ವೈ.ಸಿ ಹಾಗೂ ಉತ್ತರ ಕನ್ನಡ ಜಿಲ್ಲೆ ಹುಲಿಹೊಂಡ ಗ್ರಾಮದ ಬಸವರಾಜ ಈರಯ್ಯಾ ನಡುವನಿನಮನಿ.

Leave a comment

Your email address will not be published. Required fields are marked *