Dark Light

Blog Post

Namma Bagalkot > News > Art & Entertainment > National Siddhshree Fastival: ಶೀಘ್ರವೇ ಹುನಗುಂದದಲ್ಲಿ ರಾಷ್ಟ್ರೀಯ ಸಿದ್ದಶ್ರೀ ಉತ್ಸವ

National Siddhshree Fastival: ಶೀಘ್ರವೇ ಹುನಗುಂದದಲ್ಲಿ ರಾಷ್ಟ್ರೀಯ ಸಿದ್ದಶ್ರೀ ಉತ್ಸವ

National Siddhashree Festival to be held in Hunangund Very Soon
ಬಾಗಲಕೋಟೆಃ ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಜ.14 ರಿಂದ ಜ.16ರವರೆಗೆ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಚಿತ್ರನಟಿಯರಾದ ಪ್ರೇಮಾ, ಪ್ರಿಯಾಂಕ ಉಪೇಂದ್ರ, ನಿರ್ದೇಶಕ ವಿಕ್ಟರಿ ವಾಸು ಅವರು ಪಾಲ್ಗೊಳ್ಳುತ್ತಿದ್ದು, ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರಿಗೆ 2023ರನೇ ಸಾಲಿನ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಜ.14ರ ಕಾರ್ಯಕ್ರಮದಲ್ಲಿ ಕಾರ‍್ಯಕ್ರಮದಲ್ಲಿ ಗುಳೇದಗುಡ್ಡದ ಮರಡಿಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮುರನಾಳದ ಮಳೆಯಪ್ಪಜ್ಜನವರು, ಹೆಬ್ಬಳ್ಳಿ ಅಜ್ಜನವರು, ಜಗದ್ಗುರು ಶ್ರೀ ವಿಜಯ ಮಹಾಂತ ಶ್ರೀಗಳು, ಒಪ್ಪತ್ತೆಶ್ವರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಕಿಸಾನ ಸಮಿತಿಯ ನಿರ್ದೇಶಕ ಡಾ. ಆರ್.ಎಸ್. ರಾಜು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಜ್ಯೋತಿ ಬೆಳಗಿಸಲಿದ್ದಾರೆ ಎಂದರು.
ಜನವರಿ 15 ರಂದು ಸಂಜೆ 5 ಗಂಟೆಗೆ ಏರ್ಪಡಿಸಿರುವ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವದು. ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ, ಚಿತ್ತರಗಿ ಶ್ರೀ ಗುರುಮಹಾಂತ ಶ್ರೀಗಳು, ಅಂಕಲಗಿಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜನವರಿ 16 ರಂದು ನಡೆಯವ ಕಾರ‍್ಯಕ್ರಮವನ್ನು ಶಾಸಕ ಡಾ. ವೀರಣ್ಣ ಚರಂತಿಮಠ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವ ಎಚ್.ವೈ. ಮೇಟಿ, ಉದ್ಘಾಟಿಸಲಿದ್ದಾರೆ. ಶಿವಗಂಗೆಯ ಮಲಯ ಶಾಂತ ಮುನಿ ಶಿವಾಚಾರ್ಯರು, ಗುಡದೂರದ ನೀಲಕಂಠಾರ್ಯ ತಾತನವರು, ಧರ್ಮರ ಅಜ್ಜನವರು ಸಾನಿಧ್ಯ ವಹಿಸಲಿದ್ದು ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು.
ಕಾರ‍್ಯಕ್ರಮದಲ್ಲಿ ಹುಲಿಕಲ್ ನಟರಾಜ ಅವರಿಂದ ಪವಾಡ ಬಯಲು, ಕಲಾವತಿ ದಯಾನಂದ ಅವರಿಂದ ಸಂಗೀತ, ವಿವಿಧ ಗಣ್ಯರಿಗೆ ಸನ್ಮಾನ, ಹೆಲಿಕಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಸೇರಿದಂತೆ ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿ, ಕಲೆ ಕರ‍್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ತಿಳಿಸಿದರು.
ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *