Dark Light

Blog Post

Namma Bagalkot > News > Bagalkot > First Aid Knowledge: ಪ್ರಥಮ ಚಿಕಿತ್ಸೆ ಒದಗಿಸುವ ಕೌಶಲ ಅತ್ಯಾವಶ್ಯಕ: ಪಿ.ಸುನೀಲ್‌ಕುಮಾರ

First Aid Knowledge: ಪ್ರಥಮ ಚಿಕಿತ್ಸೆ ಒದಗಿಸುವ ಕೌಶಲ ಅತ್ಯಾವಶ್ಯಕ: ಪಿ.ಸುನೀಲ್‌ಕುಮಾರ

DC Sunil Kumar Says It is Important to Have First Aid Knowledge

ಬಾಗಲಕೋಟೆ: ಜೀವನದಲ್ಲಿ ಪ್ರತಿಯೊಬ್ಬರು ಅಪಾಯಕ್ಕೆ ಸಿಲುಕುವ ಸಂದರ್ಭದ ಬರುತ್ತಿರುವದರಿಂದ ಪ್ರಥಮ ಚಿಕಿತ್ಸೆ ಒದಗಿಸುವ ಕೌಶಲವನ್ನು ಹೊಂದುವುದು ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.

ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಪ್ರಥಮ ಚಿಕಿತ್ಸೆ (ಫಸ್ಟ್ ರೆಸ್ಪಾಂಡರ್) ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮನೆ ಬಿಟ್ಟು ಹೊರಗೆ ಬಂದು ಮರಳಿ ಮನೆ ಸೇರುವದರೊಳಗಾಗಿ ಆಕಸ್ಮಿಕ ಘಟನೆಗಳಾದ ಅಪಘಾತ, ಮೂರ್ಛೆ ರೋಗ, ನಾಯಿ, ಹಾವು ಕಡಿತ ಮುಂತಾದ ಸಮಸ್ಯೆಗಳು ಎದುರಾಗಬಹುದು ಅಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಅದರ ಬಗ್ಗೆ ಸಂಪೂರ್ಣವಾದ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಾರ್ವಜನಿಕ ಕ್ಷೇತ್ರಗಳಾದ ಪೊಲೀಸ್, ಶಿಕ್ಷಣ ಇಲಾಖೆ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ತರಬೇತಿ ನೀಡಿದಲ್ಲಿ ಅವರು ಕಾರ್ಯನಿರ್ವಹಿಸುತ್ತಿರುವ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಾಗ ಕೂಡಲೇ ಪ್ರಥಮೋಪಚಾರ ಮಾಡುವುದಲ್ಲಿದೇ ಇತರರಿಗೂ ಅದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅವಶ್ಯವಾಗಿದೆ. ಇದರಿಂದ ಸಾವಿನ ಹೊಸ್ತಿಲಲ್ಲಿ ಇರುವ ವ್ಯಕ್ತಿಯನ್ನು ಗುಣಪಡಿಸಿದಾಗ ಪುನರ್‌ಜನ್ಮದ ಋಣ ನಿಮಗೆ ಸಲ್ಲುತ್ತದೆ. ಇದರಿಂದ ಸಾಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಇಂದು ಇಲ್ಲಿ ಆಯೋಜಿಸಲಾದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ವ್ಯಕ್ತಿಗೆ ಬಂದೊದಗಿದ ಆಪತ್ತಿಗೆ ಯಾವ ರೀತಿ ಚಿಕಿತ್ಸೆ ಕೊಡುವ ಬಗ್ಗೆ ಹಲವಾರು ಪ್ರಶ್ನೆಗಳ ಪತ್ರಿಕೆಯನ್ನು ನೀಡುವ ಮೂಲಕ ಪ್ರಥಮ ಚಿಕಿತ್ಸೆ ಬಗ್ಗೆ ಅವರಲ್ಲಿದ್ದ ತಿಳುವಳಿಕೆಯನ್ನು ಪರೀಕ್ಷೆ ಮಾಡಲಾಯಿತು. ತರಬೇತಿ ಮುಗಿದ ನಂತರ ಅದೇ ಪ್ರಶ್ನೆ ಪತ್ರಿಕೆಯನ್ನು ನೀಡಿ ಪ್ರಥಮ ಚಿಕಿತ್ಸೆ ಬಗ್ಗೆ ಅರಿತಿರುವ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಮಾತನಾಡಿ ವೈದ್ಯಕೀಯ ತಿಳುವಳಿಕೆ ಇಲ್ಲದಂತಹ ವ್ಯಕ್ತಿಗಳಿಗೆ ಅಪಘಾತ, ಹಾವು ಕಡಿತ ಮುಂತಾದವು ಸಂಭವಿಸಿದರೆ ಆಸ್ಪತ್ರೆಗೆ ಬರುವ ಪೂರ್ವದಲ್ಲಿ ಪ್ರಥಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ, ಆಟೋ ಚಾಲಕರು, ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು, ಚಾಲಕರು, ಮೆಕ್ಯಾನಿಕ್, ಹೋಮ್ ಗಾರ್ಡ, ಪದವಿ ವಿದ್ಯಾರ್ಥಿಗಳು ಹಾಗೂ ಎನ್.ಜಿ.ಓ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆಯ ತರಬೇತಿಯ ಕೋ ಆರ್‌ಡಿನೇಟರ್ ಟೋನಿ, ಸಂಪನ್ಮೂಲ ವ್ಯಕ್ತಿ ಡಾ.ತಾಳಿಕೋಟಿ, ಟ್ರಾಫಿಕ್ ಪೊಲೀಸ್ ಇನ್ಸಪೆಕ್ಟರ ಉಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *