Dark Light

Blog Post

Namma Bagalkot > News > Crime > Domestic Violence :40 ರೂ.ಗಾಗಿ ಪ್ರಾಣ ಕಳೆದುಕೊಂಡ ಸೊಸೆ..!!

Domestic Violence :40 ರೂ.ಗಾಗಿ ಪ್ರಾಣ ಕಳೆದುಕೊಂಡ ಸೊಸೆ..!!

Woman loses life for 40 Rs in Bagalkot..!!
ಬಾಗಲಕೋಟೆ ತಾಲೂಕಿನ ನಕ್ಕರಗುಂದಿ ಗ್ರಾಮದ ರಂಗವ್ವ ಗೂಳಣ್ಣವರ (29) ಸಾವಿಗೀಡಾದ ಮಹಿಳೆ. ಈಕೆಯ ಸಾವಿಗೆ ಕಾರಣನಾದ ಪತಿ ಮಳಿಯಪ್ಪ, ಅತ್ತೆ ಭೀಮವ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳ ಕೊಲೆ ಮಾದರಿಯಲ್ಲಿ ಅಂತ್ಯವಾಗಲು ಕಾರಣವಾಗಿದ್ದು ಕೇವಲ 40 ರೂ. ಮಾತ್ರ. ಪ್ರತಿ ನಿತ್ಯ ಅತ್ತೆ ಹಾಗೂ ಸೊಸೆ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನ.30 ರಂದು ಮನೆಯಲ್ಲಿದ್ದ 40 ರೂ. ತೆಗೆದುಕೊಂಡಿದ್ದಾಳೆ ಎಂದು ರಂಗವ್ವ ವಿರುದ್ಧ ಅತ್ತೆ ಭೀಮವ್ವ ಆರೋಪಿಸಿದ್ದಳು. ಇಬ್ಬರ ಮಧ್ಯೆಯೂ ಜಗಳ ನಡೆದಿತ್ತು. ಆಗ ಮಳಿಯಪ್ಪ ತಾಯಿ, ಪತ್ನಿ ಇಬ್ಬರಿಗೂ ಬೈಯ್ದಿದ್ದ. ಜಗಳ ತಾರಕಕ್ಕೇರಿದಾಗ ಪತ್ನಿಗೆ ಮಳಿಯಪ್ಪ ಕಪಾಳಕ್ಕೆ ಹೊಡೆದಿದ್ದ. ಏಕಾಏಕಿ ಪ್ರಜ್ಞಾಹೀನಳಾದ ರಂಗವ್ವ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

Leave a comment

Your email address will not be published. Required fields are marked *