Dark Light

Blog Post

Namma Bagalkot > News > Bagalkot > Free Health check-up Camp: ಮುರನಾಳ ಪು. ಕೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
health check up camp

Free Health check-up Camp: ಮುರನಾಳ ಪು. ಕೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

health check up camp

MRN ayurvedic medical college, Bagalkot Organised Free Health check-up Camp in Murnal PK Village

ಬಾಗಲಕೋಟೆ : ಮುರನಾಳ ಪು. ಕೆ ಗ್ರಾಮದಲ್ಲಿ ಎಂಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು,ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಬಾಗಲಕೋಟೆ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆಯ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು . ಈ ಶಿಬಿರದಲ್ಲಿ ಸಕ್ಕರೆ ಕಾಯಿಲೆ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಜೀರ್ಣ ಸಂಬಂಧಿ ಕಾಯಿಲೆ, ಆಮವಾತ,ಮೂಲವ್ಯಾಧಿ,ಚರ್ಮ ರೋಗ , ಆಮ್ಲ ಪಿತ್ತ,ಕಾಮಾಲೆ, ಅಸ್ತಮಾ,ಅಲರ್ಜಿಯಂತಹ ಉಸಿರಾಟ ತೊಂದರೆ ವ್ಯಾಧಿಗಳು,ಹೆಣ್ಣು ಮಕ್ಕಳಲ್ಲಿ ಕಂಡುಬರುವ ಬಿಳಿಸ್ರಾವ,ಅತಿಸ್ರಾವ ಹಾಗೂ ಇನ್ನಿತರ ಋತುಸ್ರಾವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು . ಸುಮಾರು ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಉಚಿತ ಔಷಧಿ,ಚಿಕಿತ್ಸೆ ಪಡೆದುಕೊಂಡರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಸ್ಪತ್ರೆಯ ಡೀನ್ ಡಾ. ಶಿವಕುಮಾರ್ ಗಂಗಲ್, ಡಾ.ವಿಜಯಕುಮಾರ್ ಚೌಡಿ, ಡಾ.ದೀಪಾ ಗಂಗಲ, ಡಾ.ಅತಿಯಾ, ಡಾ.ದೀಪಾ ಕೆಂಪಾರ, ಡಾ.ಸುಶ್ಮಿತಾ ಶೆಟ್ಟಿ ಮತ್ತಿತರರು‌‌ ಇದ್ದರು.
Tags: MRN ayurvedic medical college, hospital and research center, Bagalkot, Murnal PK village, Dean Dr Shivakumar Gangal, Dr Deepa, Dr Vijayakumar

Leave a comment

Your email address will not be published. Required fields are marked *