Dark Light

Blog Post

Namma Bagalkot > News > Bagalkot > Our Culture should be a Beacon for the Next Generation: ನಮ್ಮ ಸಂಸ್ಕೃತಿ, ಪರಂಪೆಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಬೇಕು

Our Culture should be a Beacon for the Next Generation: ನಮ್ಮ ಸಂಸ್ಕೃತಿ, ಪರಂಪೆಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಬೇಕು

Our culture and heritage should be a beacon for the next generation – Dr. Veeranna Charantimath

ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಸಂಸ್ಕೃತಿ, ಪರಂಪೆಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಬೇಕು ಎಂದು ಬಾಗಲಕೋಟೆ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.
ಅವರು ಪಟ್ಟಣದಲ್ಲಿ ಪತಿಯೊಂದಿಗೆ ಪ್ರಾಣಾರ್ಪಣೆ ಮಾಡಿದ ಮಹಾ ಪತಿವ್ರತೆ ಹಣಗಿ ನಿಂಗಮ್ಮದೇವಿ ಗುಡಿಯ 55ನೇ ವಾರ್ಷಿಕೋತ್ಸವ ಹಾಗೂ ಕಾರ್ತಿಕೋತ್ಸವ ಸಮಾರಂಭಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇವಸ್ಥಾನದ ಜೀರ್ಣೋದ್ಧಾರಕ್ಕೆ 25 ಸಾವಿರ ಅನುದಾನವನ್ನು ನೀಡಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಹಿರಿಯ ಸಾಹಿತಿ ಮೋಹನ ಹಣಗಿಯವರು, ಹಣಗಿ ನಿಂಗಮ್ಮದೇವಿಯವರು ಅಂದಿನ ಸತಿಸಹಗಮನ ಪದ್ದತಿಯಲ್ಲಿ ಪತಿಯೊಂದಿಗೆ ಪ್ರಾಣತ್ಯಾಗ ಮಾಡುವುದರ ಮೂಲಕ, ಇಂದಿನ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠರಿಗೆ, ಪಟ್ಟಣ ಪಂಚಾಯತಿ ನೂತನ ಸದಸ್ಯರಿಗೆ ಹಾಗೂ ದಾನಿಗಳಿಗೆ ಶ್ರೀ ಹಣಗಿ ನಿಂಗಮ್ಮದೇವಿ ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು. ಬಿಜೇಪಿ ನಗರ ಘಟಕದ ಅಧ್ಯಕ್ಷ ಯಮನಪ್ಪ ನಾಗರಾಳ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜಮೀರ ಮುಲ್ಲಾ, ನೇಕಾರ ಧುರೀಣ ವಿಷ್ಣು ಗೌಡರ, ಪ.ಪಂ.ಸದಸ್ಯರಾದ ವಿಜಯಕುಮಾರ ಕನ್ನೂರ, ಸುಜಾತ ತತ್ರಾಣಿ,ಬಾಬು ಛಬ್ಬಿ, ಶ್ರೀದೇವಿ ನಿಡಗುಂದಿ, ರಾಘವೇಂದ್ರ ಮುಳ್ಳೂರ, ಬಸವರಾಜ ಬೇವೂರ, ಉಮಾಶ್ರೀ ಹಣಗಿ, ಫಾತೀಮಾ ಅತ್ತಾರ, ತುಕಾರಾಮ ಲಮಾಣಿ,ರಮೇಶ ಮುರಾಳ, ಹಾಗೂ ಹಣಗಿ ಬಂಧುಗಳು ಭಾಗವಹಿಸಿದ್ದರು.

Leave a comment

Your email address will not be published. Required fields are marked *