Dark Light

Blog Post

Namma Bagalkot > News > Bagalkot > Mallikarjun Charantimath Revolts Against MLA Charantimath: ನಮ್ಮನ್ನು ಕರೆದುಕೊಳ್ಳಲು ಪಕ್ಷಗಳು ಸಾಲುಗಟ್ಟಿ ನಿಂತಿವೆ: ಮಲ್ಲಿಕಾರ್ಜುನ ಚರಂತಿಮಠ
mallikarjun charantimath

Mallikarjun Charantimath Revolts Against MLA Charantimath: ನಮ್ಮನ್ನು ಕರೆದುಕೊಳ್ಳಲು ಪಕ್ಷಗಳು ಸಾಲುಗಟ್ಟಿ ನಿಂತಿವೆ: ಮಲ್ಲಿಕಾರ್ಜುನ ಚರಂತಿಮಠ

mallikarjun charantimath

Mallikarjun Charantimath Revolts Against MLA Charantimath Accuses of Appeasement And Selfishness
ಬಾಗಲಕೋಟೆ: ಹಾಲಿ ಶಾಸಕ, ತಮ್ಮ ಸಹೋದರ ವೀರಣ್ಣ ಚರಂತಿಮಠ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಇಲ್ಲವಾದಲ್ಲಿ ನಮ್ಮಲ್ಲೇ ಯಾರಾದರೂ ಒಬ್ಬರು ಕಣಕ್ಕಿಳಿಯುವ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಏಕವಚನದಲ್ಲಿ ಸುದೀರ್ಘ ಸುದ್ದಿಗೋಷ್ಠಿಯ ನಡೆಸಿದ ಅವರು ಶಾಸಕರ ದಿನಚರಿಯನ್ನು ಹಿಡಿದು ಅವರ ರಾಜಕೀಯ ನಿಲುಗಳವರೆಗೆ ಎಲ್ಲವನ್ನೂ ಟೀಕಿಸಿದರು.
ಇತ್ತೀಚೆಗೆ ನಡೆದ ಬಹಿರಂಗ ಸಭೆಯಲ್ಲಿ ಕಾಮಧೇನು ಸಂಸ್ಥೆಯ ವಿರುದ್ಧ ಟೀಕಿಸಿದ್ದಾರೆ. ನಾವು ಕೋವಿಡ್ ಸಂದರ್ಭದಲ್ಲಿ ಜನರಿಗಾಗಿ ಕೆಲಸ ಮಾಡಿದ್ದೇವೆ. ಅವರು ಬವಿವ ಸಂಘದ ನೆರವನ್ನು ಹೋಗಿ ಯಡಿಯೂರಪ್ಪಗೆ ಕೊಟ್ಟು ಬಂದರು. ಉತ್ತರ ಕರ್ನಾಟಕದ ಪ್ರೀತಿಯಿದಿದ್ದರೆ ಸರ್ಕಾರಕ್ಕೆ ಏಕೆ ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿನ 4 ಕೋಟಿ ರೂ.ಗಳ ನೆರವನ್ನು ನೀಡಿದರು ಎಂಬುದನ್ನು ಉತ್ತರಿಸಲಿ ಎಂದು ಹೇಳಿದರು.
ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೂ ನೀವು ಬಿಜೆಪಿ ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಜಾರಿಕೊಳ್ಳಲು ಯತ್ನಿಸಿದ ಅವರು ಈಗಿದವರನ್ನು ಬಿಟ್ಟು ಬೇರೆಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಬೆಂಬಲಿಸುತ್ತೇವೆ. ನಾವು ಚುನಾವಣಾ ಕಣದಲ್ಲಿ ಇರುತ್ತೇವೆ. ನಮ್ಮನ್ನು ಆಹ್ವಾನಿಸಲು ಪಕ್ಷಗಳು ಸಾಲುಗಟ್ಟಿ ನಿಂತಿವೆ ಎಂದು ಹೇಳಿದರು. ಪಕ್ಷದ ಹಿರಿಯರ ಸೂಚಿಸಿದರೆ ಎಂಬ ಪ್ರಶ್ನೆಗೆ, ಹಿರಿಯರ ಮಾತಿಗೆ ಬದ್ಧ ಆದರೂ ಇವರನ್ನು ಹೊರತುಪಡಿಸಿ ಮಾತ್ರ ಎಂದರು.
ಕಾಮಧೇನು ಸಂಸ್ಥೆ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಾನು ಬೆಳೆದ ಟೊಮೆಟೊ ಖರೀದಿಸುವವರು ಇರಲಿಲ್ಲ. ಆ ಸಂದರ್ಭದಲ್ಲಿ ರೈತರು ಮತ್ತು ಗ್ರಾಹಕರ ನಡುವೆ ಸೇತುವೆ ಆಗಬೇಕೆಂದು ನಿರ್ಧರಿಸಿದಾಗ ನಾವು ಆಪ್ತರಾಗಿರದಿದ್ದರೂ ಸಮಾಜ ಸೇವೆಗಾಗಿ ಒಗ್ಗೂಡಿದೇವು. 32 ಸಾವಿರ ಊಟ ಹಂಚಿ, ಆಹಾರದ ಕಿಟ್‌ಗಳನ್ನು ವಿತರಿಸಿ ಸಮಾಜ ಸೇವೆ ಮಾಡಿದ್ದೇವೆ. ಆದರೆ ಶಾಸಕರು ಇತ್ತೀಚೆಗೆ ನಡೆದ ಸಭೆಯಲ್ಲಿ ಇಂಥ ಸಂಸ್ಥೆ ಹೆಸರನ್ನು ಅನಗತ್ಯ ಪ್ರಸ್ತಾಪಿಸಿದ್ದಾರೆ. ಅವರು ವರ್ತನೆ ಬದಲಿಸಿಕೊಳ್ಳಬೇಕೆಂದರು.
ವಿದ್ಯಾಗಿರಿಯಲ್ಲಿ ತರಕಾರಿ ಮಾರಾಟಕ್ಕೆ ಬಳಸುತ್ತಿದ್ದ ಸಮುದಾಯ ಭವನವನ್ನೂ ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ ಜನ ಅದಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಮುಖಂಡ ಶಿವಕುಮಾರ ಮೇಲ್ನಾಡ ಹೇಳಿದರು. ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ವಿಜಯ ಸುಲಾಖೆ ಇದ್ದರು.

Leave a comment

Your email address will not be published. Required fields are marked *