Dark Light

Blog Post

Namma Bagalkot > News > Bagalkot > Light Vehicle Driving Training: ಲಘು ವಾಹನ ಚಾಲನಾ ಪ್ರಮಾಣಪತ್ರ ವಿತರಣೆ
rudset

Light Vehicle Driving Training: ಲಘು ವಾಹನ ಚಾಲನಾ ಪ್ರಮಾಣಪತ್ರ ವಿತರಣೆ

rudset

Certificate of Light Vehicle Driving Training Distributed
ಬಾಗಲಕೋಟೆ: ಜಿಲ್ಲಾ ಪಂಚಾಯತ, ಹಾಗೂ ಬಿವಿವಿ ಸಂಘದ ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಆರ್ ಸೆಟ್) ಸಹಯೋಗದದಲ್ಲಿ ಮಹಿಳೆಯರ ಲಘು ವಾಹನ ಚಾಲನಾ ತರಬೇತಿಯ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಿಗೆ (ಡಿಎಲ್) ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.
ಪ್ರಮಾಣ ಪತ್ರ ಮತ್ತು ಚಾಲನಾ ಪರವಾನಿಗೆ ಕಾರ್ಡ ವಿತರಿಸಿದ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ ಅವರು ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯಿಂದ ತರಬೇತಿ ಪಡೆದು ಸಾವಿರಾರು ಜನ ಮಹಿಳೆಯರು ಸ್ವ ಉದ್ಯೋಗ ಮಾಡುತ್ತಿದ್ದಾರೆ. ಈ ರುಡ್ ಸೇಟ್ ಸಂಸ್ಥೆ ವಿವಿಧ ಉದ್ಯೋಗಗಳ ತರಬೇತಿಗಳನ್ನು ನೀಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಕಲವಾಗಿದೆ ಎಂದರು.
ತರಬೇತಿ ಪಡೆದ ಶಿವಲೀಲಾ ಅಂಗಡಿ ಮಾತನಾಡಿ ಒಂದು ತಿಂಗಳ ಕಾಲ ಉಚಿತವಾಗಿ ಊಟ, ವಸತಿ ಸಹಿತ ನಮಗೆ ಅಚ್ಚುಕಟ್ಟಾಗಿ ತರಬೇತಿ ನೀಡಿದ್ದಾರೆ. ಇದರಿಂದ ಸ್ವ ಉದ್ಯೋಗ ಕೈಗೊಳ್ಳಲು ಆತ್ಮಸ್ಥೈರ್ಯವನ್ನು ತುಂಬಿದಂತಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಬಿ.ಎಸ್.ಅಂಗಡಿ ಅವರು ತರಬೇತಿ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಸಿ.ಆರ್.ಮುಂಡರಗಿ, ಆರ್.ಟಿ.ಓ ಅಧಿಕಾರಿ ಜಗದೀಶ್ವರಪ್ಪ ಪಿ., ತರಬೇತಿ ಸಂಸ್ಥೆಯ ನಿರ್ದೇಶಕ ಶರಣಬಸಪ್ಪ ಹೂನುರ, ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ, ಶಾಬಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಂದು ತಿಂಗಳ ಕಾಲ ಉಚಿತವಾಗಿ ವಸತಿ ಸಹಿತ ತರಬೇತಿ ಪಡೆದ 32 ಜನ ಮಹಿಳೆಯರರಿಗೆ ಮಹಿಳೆಯರ ಲಘು ವಾಹನ ಚಾಲನಾ ತರಬೇತಿಯ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಿಗೆ(ಡಿಎಲ್) ವಿತರಿಸಲಾಯಿತು.

Leave a comment

Your email address will not be published. Required fields are marked *