Dark Light

Blog Post

Namma Bagalkot > News > Agriculture and Farming > Kuraburu Shanthakumar Demands Reduction in Sugar Yield: ಸಕ್ಕರೆ ಇಳುವರಿ ಕಡಿತಕ್ಕೆ ಕುರಬೂರು ಶಾಂತಕುಮಾರ ಆಗ್ರಹ

Kuraburu Shanthakumar Demands Reduction in Sugar Yield: ಸಕ್ಕರೆ ಇಳುವರಿ ಕಡಿತಕ್ಕೆ ಕುರಬೂರು ಶಾಂತಕುಮಾರ ಆಗ್ರಹ

Kuraburu Shanthakumar demands reduction in sugar yield
ಬಾಗಲಕೋಟೆ: ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡುವ ವೇಳೆ ಇಳುವರಿ ಪ್ರಮಾಣವನ್ನು 10.25ಕ್ಕೆ ಹೆಚ್ಚಿಸಿರುವುದನ್ನು ಕೈ ಬಿಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ದೆಹಲಿಯಲ್ಲಿ ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಲಾಗಿದೆ. ಸಕ್ಕರೆ ಇಳುವರಿ ಪ್ರಮಾಣ ಹೆಚ್ಚಳದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
39 ದಿನಗಳ ಕಾಲ ಕಬ್ಬು ಬೆಳೆಗಾರರ ಸಂಘ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಪ್ರತಿ ಟನ್ ಗೆ 150 ರೂ. ಹೆಚ್ಚುವರಿ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಹೆಚ್ಚುವರಿ 950 ಕೋಟಿ ರೂ. ರೈತ ಸಮೂಹಕ್ಕೆ ತಲುಪಲಿದೆ ಎಂದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಬೀದರ್‌ನಲ್ಲಿ 650 ರೂ.ಕಡಿತವಾದರೆ ಬಾಗಲಕೋಟೆ ಜಿಲ್ಲೆಯಲ್ಲಿ 1 ಸಾವಿರ ರೂ.ಗಳನ್ನು ಕಡಿತಗೊಳಿಸಲಾಗುತ್ತಿದೆ. 5 ಸಾವಿರ ರೂ.ಗಳ ಲಗಾಣಿನ್ನು ಕಡಿತಗೊಳಿಸಲಾಗುತ್ತಿದೆ. ಇದು ನಿಲ್ಲಬೇಕೆಂದು ಹೇಳಿದರು.
ಫೆಬ್ರುವರಿಯಲ್ಲಿ ಪಂಜಾಬ್‌ನಲ್ಲಿ ಸಂಯುಕ್ತ ರೈತ ಸಂಘಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜಕೀಯೇತರ ನಾಯಕತ್ವದಲ್ಲಿ ರೈತ ಚಳುವಳಿ ನಡೆಯಬೇಕಿದೆ. ದೆಹಲಿಯಲ್ಲಿ ನಾಯಕತ್ವ ವಹಿಸಿದ್ದ ರಾಕೇಶ್ ಸಿಂಗ್ ಟಕಾಯತ್ ಅವರು ಭಾರತ ಜೋಡಿ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ರೈತ ಮುಖಂಡರಾದವರು ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂದರು.
ಜಗತ್ತಿನಲ್ಲೇ ಅತೀ ಹೆಚ್ಚು ಕಬ್ಬು ಬೆಳೆಯುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು, ದೇಶದಲ್ಲಿ 530 ಕಾರ್ಖಾನೆಗಳು, ರಾಜ್ಯದಲ್ಲಿ 78 ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಬ್ಬಿಗೆ 3500 ರೂ.ಗಳನ್ನು ನೀಡಲಾಗುತ್ತಿದ್ದು, ಪಂಜಾಬ್‌ನಲ್ಲಿ 3800 ರೂ.ಗಳನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲೂ ಅದೇ ಮಾದರಿಯನ್ನು ಅನುಸರಿಸುವಂತೆ ಸರ್ಕಾರದ ಗಮನಸೆಳೆಯಲಾಗಿದೆ ಎಂದರು.
ರೈತ ಸಂಘಟನೆಗಳು ಒಗ್ಗೂಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತ ಸಂಘಟನೆಗಳು ಒಗ್ಗೂಡುವುದು ಅಸಾಧ್ಯ ಎನಿಸಿದೆ. ಮುಖಂಡರಾದವರು ಒಂದೊಂದು ಪಕ್ಷಗಳ ಜತೆಗೆ ಗುರುತಿಸಿಕೊಂಡರೆ ಒಗ್ಗೂಡುವುದು ಕಷ್ಟ ಎಂದರು.
ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ಕಲ್ಲಪ್ಪ ಬಿರಾದಾರ, ಭೀಮಪ್ಪ ಮೊದಲ್ಮಟ್ಟಿ, ಪರಶುರಾಮ ಮತ್ತಿತರರು ಇದ್ದರು

Leave a comment

Your email address will not be published. Required fields are marked *