Dark Light

Blog Post

Namma Bagalkot > News > Sports > Half Marathon on January 14th: ಜ.14 ರಂದು ಹಾಫ್ ಮ್ಯಾರಾಥಾನ್ ಓಟ

Half Marathon on January 14th: ಜ.14 ರಂದು ಹಾಫ್ ಮ್ಯಾರಾಥಾನ್ ಓಟ

Half marathon on January 14th
ಬಾಗಲಕೋಟೆ: ಹಾಫ್ ಮ್ಯಾರಾಥಾನ್ ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದೊಂದಿಗೆ ಆಲ್ ಇಂಡಿಯಾ ಇನ್ಸಸ್ಟಿಟ್ಯೂಟ್ ಆಫ್ ಲೋಕಲ್ ಸೇಲ್ಫ್ ಗೌರನ್ಮಂಟ್ ,ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ಹಾಗೂ ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್‌ವತಿಯಿಂದ ಜ.14 ರಂದು ಹಾಫ್ ಮ್ಯಾರಾಥಾನ ಓಟವನ್ನು ಆಯೋಜನೆ ಮಾಡಲಾಗಿದೆಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ ಸುರಪುರಮಠ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಾಫ್ ಮ್ಯಾರಾಥಾನ್ ಕಾಳಿದಾಸ ಕಾಲೇಜು ಸರ್ಕಲ್ ದಿಂದ ಬೆಳಗ್ಗೆ 5.30ಕ್ಕೆ ಆರಂಭಗೊಂಡು ಸೀಮಿಕೇರಿ ಕ್ರಾಸ್ ವರೆಗೆ ನಡೆಯುತ್ತದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಜನ ಓಟದಲ್ಲಿ ಸೇರಲಿದ್ದಾರೆ. ಮುಖ್ಯವಾಗಿ ಈ ಮ್ಯಾರಾಥಾನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಾಥಾನ್ ರನ್ನರ್ ಅರುಣ ಭಾರದ್ವಾಜ ಭಾಗವಹಿಸಲಿದ್ದಾರೆ. ಅವರು ಶಿರೂರ ಅಗಸಿ ಬರುತ್ತಾರೆ. ಅವರನ್ನು ಸ್ವಾಗತಿಸುತ್ತೇವೆ.ಅಲ್ಲಿಂದ ಸೈಕಲ್ ಜಾಥಾಮೂಲಕ ವಿದ್ಯಾಗಿರಿ ಇಂಜಿನೀಯರಿಂಗ್ ಕಾಲೇಜು ವರೆಗೆ ಜಾಥಾ ಮಾಡಲಾಗುತ್ತದೆಂದರು.

Leave a comment

Your email address will not be published. Required fields are marked *