Dark Light

Blog Post

Namma Bagalkot > News > Agriculture and Farming > Rural Banking: ಜಿಲ್ಲೆಯ ಹಳ್ಳಿಗಳಿಗೆ ಬ್ಯಾಂಕ್ ಗಳು ಬರಲು ರೈತ ಆತ್ಮಹತ್ಯೆಯ ಹಾದಿ ಹಿಡಿಯಬೇಕಾ..?

Rural Banking: ಜಿಲ್ಲೆಯ ಹಳ್ಳಿಗಳಿಗೆ ಬ್ಯಾಂಕ್ ಗಳು ಬರಲು ರೈತ ಆತ್ಮಹತ್ಯೆಯ ಹಾದಿ ಹಿಡಿಯಬೇಕಾ..?

Does the farmer have to commit suicide if the banks have to reach him..??

ನಮ್ಮ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ನಮ್ಮ ಜಿಲ್ಲೆಯ ಪ್ರಗತಿ ನೀರಾವರಿ ಹಾಗೂ ಕೃಷಿಯ ಮೇಲೆ ಅವಲಂಬಿಸಿದೆ. ಅನ್ನದಾತನ ಉನ್ನತಿಯಾದರೆ ಜಿಲ್ಲೆಯ ಉನ್ನತಿಯಾದಂತೆಯೇ. ಆದರೆ ಅನ್ನದಾತನ ಉನ್ನತಿಗೆ ಸರ್ಕಾರದ ಹಾಗೂ ಸಮಾಜದ ಬೆಂಬಲವೂ ಬೇಕು.
ಕೃಷಿಗೆ ಅಗತ್ಯವಾದ ಬೀಜಗಳು, ರಸಗೊಬ್ಬರಗಳು, ನೀರಾವರಿ ಹಾಗೂ ಯಂತ್ರೋಪಕರಣಗಳು ಸಕಾಲದಲ್ಲಿ, ಸರಿಯಾದ ಪ್ರಮಾಣದಲ್ಲಿ ದೊರೆತರೆ ರೈತನಿಗೆ ಅದಕ್ಕಿಂತ ದೊಡ್ಡ ಪ್ರೇರಣೆ ಯಾವುದಿಲ್ಲ ಹೇಳಿ. ಇದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆ ಆತನ ನೆರವಿಗೆ ಬಂದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಆದರೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ನಿಜವಾಗಲೂ ರೈತಸ್ನೇಹಿಯೇ.?
ಜನ್ ಧನ್ ಅಭಿಯಾನದಿಂದ ಖಾತೆಗಳನ್ನಂತೂ ತೆರೆಯಲಾಯಿತು ಆದರೆ ನಿಜವಾಗಿಯೂ ಬ್ಯಾಂಕಿಂಗ್ ವ್ಯವಸ್ಥೆ ಕಟ್ಟಕಡೆಯ ಹಳ್ಳಿಗೆ ತಲುಪಿದೆಯೇ. ಉತ್ತರ ಇಲ್ಲ.
ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಸರಕಾರ ಲೀಡ್ ಬ್ಯಾಂಕ್ ಗಳನ್ನು ತೆರೆದಿದೆ ಅದರೊಂದಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೂ ಇವೆ . ಹಾಗಾದರೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಹೇಗಿದೆ?
ಸರ್ಕಾರದ ಅಂಕಿ ಅಂಶಗಳೇ ಹೇಳುವಂತೆ ಜಿಲ್ಲೆಯ 575 ಹಳ್ಳಿಗಳಲ್ಲಿ ಬರೀ 217 ಹಳ್ಳಿಗಳು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿವೆ ಅಂದರೆ ಕೇವಲ ಶೇಕಡ 37 ಪ್ರತಿಶತ ಹಳ್ಳಿಗಳಲ್ಲಿ ಬ್ಯಾಂಕ್ ಗಳಿವೆ. ಹಾಗಾದರೆ ಉಳಿದ ಹಳ್ಳಿಗಳ ಜನರು ಎಲ್ಲಿಗೆ ಹೋಗಬೇಕು? ಅಧಿಕಾರಿಗಳನ್ನು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಸಾಮಾನ್ಯರ ಸ್ಥಿತಿ ಹೀಗಾದರೆ ಬೆಳೆಗಾಗಿ ಸಾಲವನ್ನೇ ನಂಬಿರುವ ರೈತರು ಏನು ಮಾಡಬೇಕು. ಖಾಸಗಿ ಲೇವಾದೇವಿದಾರರ ಹತ್ತಿರ ಸಾಲಕೇಳಿ ಅವರ ಕಿರುಕುಳಕ್ಕೆ ಗುರಿಯಾಗಬೇಕೆ.?? ಅಥವಾ ಜಮೀನು ಅಡವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕೆ..??

Leave a comment

Your email address will not be published. Required fields are marked *