Dark Light

Blog Post

Namma Bagalkot > News > Agriculture and Farming > Check Your Field Mutation in Mobile: ನಿಮ್ಮ ಹೊಲದ ಮ್ಯುಟೇಷನ್ ಮೊಬೈಲ್ನಲ್ಲಿಯೇ ಚೆಕ್ ಮಾಡಿ

Check Your Field Mutation in Mobile: ನಿಮ್ಮ ಹೊಲದ ಮ್ಯುಟೇಷನ್ ಮೊಬೈಲ್ನಲ್ಲಿಯೇ ಚೆಕ್ ಮಾಡಿ

Check Your Field Mutation in Mobile
ರೈತರು ತಮ್ಮ ಜಮೀನಿನ ಮುಟೇಶನ್ ಇತಿಹಾಸವನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಹಾಗೂ ನಿಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ರೈತರು ದೇಶದ ಯಾವುದೇ ಮೂಲೆಯಲ್ಲಿ ಕುಳಿತು ತಮ್ಮ ಯಾವುದೇ ಜಮೀನಿನ ಮುಟೇಶನ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು https://landrecords.karnataka.gov.in/service40/PendcySurveyNoWiseRpt ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ರಿಪೋರ್ಟ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ಭೂಮಿ ಆರ್.ಟಿ.ಸಿ ಮುಟೇಶನ್ ಹಿಸ್ಟರಿ ಕೆಳಗಡೆ ರೈತರು ಯಾವ ಜಿಲ್ಲೆಗೆ ಸೇರಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಂಡು ಯಾವ ಹೊಲದ ಮುಟೇಶನ್ ಇತಿಹಾಸ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ನೀವು ನಮೂದಿಸಿದ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಪ್ರಕಾರ ಜಮೀನು ಹೇಗೆ ವರ್ಗಾವಣೆಯಾಗಿದೆ. ಅಂದರೆ ಜಮೀನಿನ ಪೋಡಿಯಾಗಿದೆಯೋ ಅಥವಾ ಖಾತೆ ಬದಲಾವಣೆಯಾಗಿದೆ ಅಥವಾ ಇನ್ನಾವ ಮೂಲದಿಂದ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ. ಇದರೊಂದಿಗೆ ಯಾವ ದಿನಾಂಕದಂದು ಹಕ್ಕು ಬದಲಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ.
ರೈತರು ಒಂದು ವೇಳೆ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ ಎಷ್ಟು ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಇರುತ್ತದೆ. ನಿಮ್ಮ ಸರ್ವೆ ನಂಬರದೊಳಗೆ ಬರುವ ಹಿಸ್ಸಾ ನಂಬರ್ ನಲ್ಲಿ ಯಾರು ಯಾರು ಬ್ಯಾಂಕಿನಿಂದ ಸಾಲ ಪಡೆಯಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.
ನೀವು ನಮೂದಿಸಿದ ಸರ್ವೆ ನಂಬರ್ ದೊಳಗೆ ಬರುವ ಹಿಸ್ಸಾ ನಂಬರ್ ಪ್ರಕಾರ ಜಮೀನಿನ ಹಕ್ಕು ಬದಲಾವಣೆ ಮಾಡಿದವರು ಯಾರು? ಯಾರಿಗೆ ಜಮೀನು ಹಕ್ಕು ಬದಲಾವಣೆ ಮಾಡಲಾಗಿದೆ? ಜಮೀನು ಹೇಗೆ ಬದಲಾವಣೆ ಮಾಡಲಾಗಿದೆ? ಎಷ್ಟು ಎಕರೆ ಜಮೀನು ಬದಲಾವಣೆ ಮಾಡಲಾಗಿದೆ ಹಾಗೂ ಜಮೀನು ಜಂಟಿಯಾಗಿದೆಯೇ ಪ್ರತ್ಯೇಕವಾಗಿದೆಯೋ ಎಂಬ ಮಾಹಿತಿಯನ್ನು ಸಹ ನೀಡಲಾಗಿರುತ್ತದೆ.

Leave a comment

Your email address will not be published. Required fields are marked *