Dark Light

Blog Post

Namma Bagalkot > News > Agriculture and Farming > Cereal, Organic fair ends, 4.68 lakh Rs. Business: ಸಿರಿಧಾನ್ಯ, ಸಾವಯವ ಮೇಳಕ್ಕೆ ತೆರೆ 4.68 ಲಕ್ಷ ರೂ. ವ್ಯಾಪಾರ

Cereal, Organic fair ends, 4.68 lakh Rs. Business: ಸಿರಿಧಾನ್ಯ, ಸಾವಯವ ಮೇಳಕ್ಕೆ ತೆರೆ 4.68 ಲಕ್ಷ ರೂ. ವ್ಯಾಪಾರ

Cereal, organic fair ends, 4.68 lakh Rs. business


ಬಾಗಲಕೋಟೆ: ಸಿರಿಧಾನ್ಯ ಮತ್ತು ಸಾವಯವ ಮೇಳದ ಎರಡನೇ ದಿನ ಮಂಗಳವಾರದಂದು ನಡೆದ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ಉತ್ಪಾದಕರು ಮತ್ತು ಮಾರುಕಟ್ಟೆದಾರರ (ಬಿ2ಬಿ) ಸಭೆಯಲ್ಲಿ 7 ಖರೀದಿ ಸಂಸ್ಥೆಗಳು, 60 ಜನ ರೈತರು ಪಾಲ್ಗೊಂಡಿದ್ದರು.
ಬಿ2ಬಿ ಸಭೆಯಲ್ಲಿ 7 ಖರೀದಿ ಸಂಸ್ಥೆಗಳು ಪಾಲ್ಗೊಂಡಿದ್ದು, ಖರೀದಿ ಸಂಸ್ಥೆಯ ಪ್ರತಿನಿಧಿ ಹಾಗೂ ನಿರ್ದೇಶಕರಾದ ಹಾವೇರಿ ಜಿಲ್ಲೆಯ ಚಂದ್ರಕಾಂತ ಸಂಗೂರ, ಮಹಾದೇವ ಮಂಟೂರ, ಹಾರುಗೇರೆ ಜಿಲ್ಲೆಯ ಶ್ರೀಮಂತ ಸದಲಗೇರಿ, ಬಾಗಲಕೋಟೆ ಜಿಲ್ಲೆಯ ರವಿ ಸಜ್ಜನ, ವಿಜಯಪುರ ಜಿಲ್ಲೆಯ ಪರಮಾನಂದ, ಬಾಗಲಕೋಟೆ ಜಿಲ್ಲೆಯ ಡಾ.ಬಿ.ಆರ್.ಅಥಣಿ, ಮುಧೋಳ ತಾಲೂಕಿನ ಉದಗಟ್ಟಿಯ ಗೌಡರ ಜಾಗರಿ ಉತ್ಪಾಧನಾ ಘಟಕದ ನಿರ್ದಶಕರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ರೈತರು ಬೆಳೆದ ಉತ್ಪನ್ನಗಳ ಆಧಾರದ ಮೇಲೆ ಖರೀದಿದಾರರು ಒಡಂಬಡಿಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಖರೀದಿದಾರರಾದ ಡಾ.ಬಿ.ಆರ್. ಅಥಣಿ ಅವರು ಬಾಗಲಕೋಟೆ ನಗರದಲ್ಲಿ ಗ್ರೀನ್ ಫುಡ್ ಸಂಸ್ಥೆ ನಡೆಸುತ್ತಿದ್ದು, ಇವರು 58 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಸಿರಿಧಾನ್ಯಗಳ ಸಂಸ್ಕರಣೆ, ಮೀನುಗಾರಿಕೆ, ರೇಷ್ಮೆ, ಕೃಷಿ ಸೇರಿದಂತೆ ಸಮಗ್ರ ಬೇಸಾಯ ಪ್ರಚೂರಪಡಿಸುತ್ತಿರುವದರಿಂದ ಸಿರಿಧಾನ್ಯಕ್ಕೂ ಸಹ ಹೆಚ್ಚಿನ ಲಾಭ ಬರಲಿದೆ. ಜಾನುವಾರು ಆಧಾರಿತ ಕೃಷಿ ಮಾಡುತ್ತಿರುವದರಿಂದ ಒಂದು ಸಾವಿರ ಟನ್ ಸಿರಿಧಾನ್ಯಗಳ ಬೇಡಿಕೆ ಇರುವುದಾಗಿ ಡಾ.ಬಿ.ಆರ್.ಅಥಣಿ ತಿಳಿಸಿದರು.
ಮುಧೋಳ ತಾಲೂಕಿನ ಉದಗಟ್ಟಿಯಲ್ಲಿರುವ ಗೌಡರ ಜಾಗರಿ ಉತ್ಪಾಧನಾ ಘಟಕವು ಸಾವಯವ ಬೆಲ್ಲ, ಪೌಡರ, ಜ್ಯೂಸ್ ಸೇರಿದಂತೆ ವಿವಿಧ ಬೆಲ್ಲದ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ತಮ್ಮದೇ 200 ಎಕರೆ ಜಮೀನಿನಲ್ಲಿ ಕಬ್ಬನ್ನು ಬೆಳೆಯುತ್ತಿದ್ದು, ಕಬ್ಬಿನಿಂದ ಹೊಡಿದು ಸಾವಯವ ಬೆಲ್ಲದ ಉತ್ಪನ್ನ ಪ್ಯಾಕ್ ಆಗಿ ಬರುವವರೆಗೂ ಸಂಪೂರ್ಣ ಯಂತ್ರೋಪಕರಣಗಳ ಮೂಲಕ ಮಾಡಲಾಗುತ್ತಿದೆ. ಇಂತಹ ಉತ್ಪಾದನಾ ಘಟಕ ಭಾರತದಲ್ಲಿ ಮೊದಲವೆಂದರು ತಪ್ಪಾಗಲಾರದು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಯೋಗೇಶ ಅಪ್ಪಾಜಯ್ಯ ಅವರು ಬಂಡವಾಳ ಶಾಹಿ ವ್ಯಾಪಾರಸ್ಥರಿಗೆ ಬಣ್ಣ ಬಣ್ಣದ ಜಾಹೀರಾತಿಗೆ ರೈತರು ಮತ್ತು ಗ್ರಾಹಕರು ಮರುಳಾಗುವದನ್ನು ತಪ್ಪಿಸಲು ಮಂಡ್ಯ ಜಿಲ್ಲೆಯಲ್ಲಿ ವಿಕಸನ ಎಂಬ 39 ವರ್ಷ ಅನುಭವವಿರುವ ಎನ್‍ಜಿಓಗಳು ಮುಂದೆ ಬಂದಿದ್ದು, ಈಗಾಗಲೇ ಮುಧೋಳ ಹಾಗೂ ಲೋಕಾಪೂರದಲ್ಲಿ ಅವರ ಸಂಸ್ಥೆಗಳು ಪ್ರಾರಂಭಿಸಿದ್ದಾರೆ. ಈಗಾಗಲೇ ಅನುಮತಿ ಪಡೆದ ಸಣ್ಣ ಸಣ್ಣ ಎನ್‍ಜಿ.ಓ, ಮಹಿಳಾ ಸಂಘಟನೆಗಳು ಈ ಸಂಘಟನೆಯೊಂದಿಗೆ ಕೈ ಜೋಡಿಸಿದಲ್ಲಿ ನಿಮ್ಮ ಹೆಸರಿನ ಬ್ರ್ಯಾಂಡ್‍ಗಳನ್ನು ಗ್ರಾಹಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇಂತಹ ಸಾಹಸಕ್ಕೆ ಕೈಹಾಕಿದ ಸ್ಥಳೀಯರಾಗಿದ್ದ ಡಾ.ಬಿ.ಆರ್.ಅಥಣಿ ಹಾಗೂ ಗೌಡರ ಜಾಗರಿ ಉತ್ಪಾದಕ ಘಟಕದವರು ಗ್ರಾಮೀಣ ಪ್ರದೇಶದವರಾಗಿದ್ದರಿಂದ ರೈತರು ಬೆಳೆ ಬೆಳೆಯನ್ನು ತಾವೇ ಖರೀದಿಸಿ ಸಂಸ್ಕರಣೆ ಮಾಡಿ ಮಾಡಿದಾಗ ಯಾವುದೇ ಮದ್ಯವರ್ತಿಗಳು ಇರದೇ ನೇರವಾಗಿ ಆದಾಯವನ್ನು ಪಡೆಯಬಹುದಾಗಿದೆ. ಈ ಮೇಳದ ಮೂಲಕ ಖರೀದಿದಾರರು ಆಗಮಿಸಿದ್ದು, ಪ್ರತಿಯೊಬ್ಬರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಬಾಗಲಕೋಟೆ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ, ಜಮಖಂಡಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕೆ ರೈತರು ಹಾಗೂ ಸಾರ್ವಜನಿಕರು ಸೇರಿ ಒಟ್ಟು 5200 ಜನ ಆಗಮಿಸಿದ್ದಾರೆ. ಅಲ್ಲದೇ ವಿವಿಧ ಮಳಿಗೆಯಲ್ಲಿ ಒಟ್ಟು 4.68 ಲಕ್ಷ ರೂ.ಗಳ ವ್ಯಾಪಾರ ಆಗಿರುವುದು ಕಂಡುಬಂದಿತು.

Leave a comment

Your email address will not be published. Required fields are marked *