Dark Light

Blog Post

Namma Bagalkot > News > Bagalkot > BL santosh strict warning in core committee: ಕೋರ್ ಕಮಿಟಿಯಲ್ಲಿ ಬಿ.ಎಲ್.ಸಂತೋಷ್ ಖಡಕ್ ಸೂಚನೆ

BL santosh strict warning in core committee: ಕೋರ್ ಕಮಿಟಿಯಲ್ಲಿ ಬಿ.ಎಲ್.ಸಂತೋಷ್ ಖಡಕ್ ಸೂಚನೆ

BL Santosh strict warning in core committee

ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕೋರ್ ಕಮಿಟಿ ಸಭೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರ ಸಮ್ಮುಖದಲ್ಲಿ ನಡೆಯುವ ಮೂಲಕ ತೀವ್ರ ಸಂಚಲನಕ್ಕೆ ಕಾರಣವಾಯಿತು.

ಜಿಲ್ಲೆಯ ಸಂಸದರು, ಸಚಿವರು, ಶಾಸಕರು, ಕೆಲವು ಅಪೇಕ್ಷಿತ ನಾಯಕರನ್ನೊಳಗೊಂಡ ಸಭೆಯಲ್ಲಿ ಕ್ಷೇತ್ರವಾರು ಇರುವ ಅಸಮಾಧಾನದ ವಿಚಾರವನ್ನು ಪ್ರಸ್ತಾಪಿಸದೆ ಬಿ.ಎಲ್.ಸಂತೋಷ ಅವರು ಮುಂಬರುವ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಿದರು.

ಜಿಲ್ಲೆಗೆ ಪ್ರಮುಖವಾಗಿ ಅಗತ್ಯವಿರುವ ಯೋಜನೆಗಳು, ಸರ್ಕಾರದ ನಿರೀಕ್ಷೆಗಳನ್ನು ಬಿ.ಎಲ್.ಸಂತೋಷ ಅವರು ಪ್ರಸ್ತಾಪಿಸಿದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಆದ್ಯತೆ, ಮುಳುಗಡೆ ಸಮಸ್ಯೆಗಳ ಇತ್ಯರ್ಥ ಜಿಲ್ಲೆಯ ಜ್ವಲಂತ ಸಮಸ್ಯೆ ಆಗಿದ್ದು, ಅದಕ್ಕೆ ಒತ್ತು ದೊರೆಯಬೇಕಿದೆ ಎಂದು ಸಭೆಯಲ್ಲಿ ನಾಯಕರುಗಳು ಸಲಹೆ ಮಾಡಿದರು.

ಇದಲ್ಲದೇ ಜಿಲ್ಲೆಗೆ ಮುಖ್ಯಮಂತ್ರಿಗಳ ಆಗಮನವಾಗಬೇಕೆಂದು ಪದೇ, ಪದೆ ದಿನಾಂಕವನ್ನು ಕೇಳುತ್ತಿದ್ದೇವೆ ಅವರು ಬಂದು ಜಿಲ್ಲೆಯ ಯೋಜನೆಗಳಿಗೆ ಚಾಲನೆ ನೀಡಿದರೆ ಪಕ್ಷದ ಬಗ್ಗೆ ಜನ ಮತ್ತಷ್ಟು ಆಕರ್ಷಿತರಾಗಲಿದ್ದಾರೆ. ಹೀಗಾಗಿ ಇಲ್ಲಿನ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಆಗಮಿಸಬೇಕೆಂದಾಗ ಜಿಲ್ಲೆಯಲ್ಲೇ ಪ್ರಭಾವಿ ಮಂತ್ರಿಗಳಿದ್ದೀರಿ ಮುಖ್ಯಮಂತ್ರಿಗಳನ್ನು ಕರೆತರುವುದು ನಿಮಗೆ ಹೆಚ್ಚಿನ ವಿಷಯವಲ್ಲ ಎಂದು ಬಿ.ಎಲ್.ಸಂತೋಷ ಹೇಳಿದರು ಎಂದು ತಿಳಿದು ಬಂದಿದೆ.

15-20 ವರ್ಷಗಳ ಕಾಲ ನಿಮ್ಮ ಶಾಸಕರುಗಳ ಜತೆಗಿದ್ದು ಪಕ್ಷದ ಗೆಲುವಿಗೆ ಕಾರಣವಾದವರು ಮುನಿಸಿಕೊಂಡಿದ್ದರೆ ಅಂಥವರ ಮನವೋಲಿಕೆಗೆ ಮುಂದಾಗಬೇಕು. ಪಕ್ಷವನ್ನೇ ಸೋಲಿಸುತ್ತೇವೆ ಎನ್ನುವ, ನಾಯಕರುಗಳ ಬಗ್ಗೆ ಕೀಳಾಗಿ ಮಾತನಾಡುವವರಿಗೆ ಆದ್ಯತೆ ಕೊಡುವುದು ಬೇಡ ಅಂತವರಿಗೆ ಉತ್ತರ ಕೊಡುವದರಲ್ಲಿ ಸಮಯವನ್ನು ವ್ಯರ್ಥ ಮಾಡುವುದರ ಬದಲಾಗಿ ಪಕ್ಷಬ ಸಂಘಟನೆಗೆ ಮುಂದಾಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲು ಪೂರಕ ವಾತಾವರಣವಿದೆ. ಹೀಗಾಗಿ ಎಲ್ಲವನ್ನು ಬದಿಗಿರಿಸಿ ಪಕ್ಷದ ಸಂಘಟನೆಗೆ ಆದ್ಯತೆ ಕೊಡಬೇಕು. ಟಿಕೆಟ್ ವಿಚಾರವಾದರೂ ಅಷ್ಟೇ ಅದನ್ನು ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪಕ್ಷ ಗೆಲ್ಲಿಸುವುದು ಹೇಗೆ ಎಂಬುದರ ಕಡೆಗೆ ಮಾತ್ರವೇ ನಾಯಕರಗಳು ಮುಂದಾಗಬೇಕೆಂದು ಹೇಳಿದರು.

ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಾಸಕರಾದ ಸಿದ್ದು ಸವದಿ, ಡಾ.ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ವಿಪ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್.ಪೂಜಾರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ಜಿ.ಎಸ್.ನ್ಯಾಮಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಸಹ ಪ್ರಭಾರಿ ಬಸವರಾಜ ಯಂಕಂಚಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಶಾ, ಜಿಲ್ಲಾ ಪ್ರಭಾರಿ, ಶಾಸಕ ಅಭಯ ಪಾಟೀಲ ಅವರು ಭಾಗವಹಿಸಿದ್ದರು.

Leave a comment

Your email address will not be published. Required fields are marked *