Dark Light

Blog Post

Namma Bagalkot > News > Bagalkot > Natural Gas Supply Unit: ಮೊದಲ ಕೊಳವೆ ನೈಸರ್ಗಿಕ ಅನಿಲ ಪೂರೈಕೆಯ ಘಟಕ ಉದ್ಘಾಟನೆ

Natural Gas Supply Unit: ಮೊದಲ ಕೊಳವೆ ನೈಸರ್ಗಿಕ ಅನಿಲ ಪೂರೈಕೆಯ ಘಟಕ ಉದ್ಘಾಟನೆ

First Natural Gas Supply Unit Inaugurated in the City
ಬಾಗಲಕೋಟೆ: ಕೊಳವೆ ಮಾರ್ಗದ ಮೂಲಕ ಮನೆಮನೆಗೆ ಮನೆ ಅಡುಗೆ ಅನಿಲ ಸಂಪರ್ಕಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಇಂದು ಸಾಕಾರಗೊಳ್ಳುತ್ತಿದೆ. ಸರಕಾರ ಅದಕ್ಕಾಗಿ ಬಾಗಲಕೋಟೆ ಗೆ 95 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಎಜಿಪಿ ಸಂಸ್ಥೆ ಯ ಸಹಯೋಗದೊಂದಿಗೆ ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಅವರು ಬಾಗಲಕೋಟೆ ನಗರ ವಿದ್ಯಾಗಿರಿಯ ಅಕ್ಕಿಮರಡಿಯಲ್ಲಿರುವ ಮೊದಲ ದೇಶೀಯ ಕೊಳವೆ ನೈಸರ್ಗಿಕ ಅನಿಲ ಪೂರೈಕೆಯ ಘಟಕ ಉದ್ಘಾಟನೆ ಮಾಡಿ ಮಾತನಾಡಿ, ಈಗ ಮನೆಮನೆಗೆ ಗ್ಯಾಸ್ ಪೈಪ್ ಲೈನ್ ಮಾಡಿರುವುದರಿಂದ ಶೇ.50ರಷ್ಟು ಹಣ, ಶಕ್ತಿಯೂ ಉಳಿತಾಯ ಆಗುತ್ತದೆ. ಈಗ ವಿದ್ಯಾಗಿರಿ ಯ ಮನೆಮನೆಗೆ ಪೂರೈಕೆಯನ್ನು ಆರಂಭಿಸಲಾಗಿದೆ. ಇನ್ನೂ ನವನಗರ ದಲ್ಲಿ ಆರಂಭಿಸಲಾಗುತ್ತದೆ. ಆದ್ದರಿಂದ ಏಜೆನ್ಸಿಯ ಅಧಿಕಾರಿಗಳು ಉಳಿದ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಗದೀಶ ಬುರಲಿ,ಜಿಲ್ಲಾ ಪ್ರಧಾನ ಕಾರ್ಯದಶ್ರೀ ರಾಜು ನಾಯ್ಕರ ಸೇರಿದಂತೆ ನಗರಸಭೆ ಸದಸ್ಯರು ಭಾಗವಹಿಸಿದ್ದರು.

Leave a comment

Your email address will not be published. Required fields are marked *