Dark Light

Blog Post

Namma Bagalkot > News > Agriculture and Farming > E-KYC for PM Kisan: ಪಿಎಂ ಕಿಸಾನ್ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯ

E-KYC for PM Kisan: ಪಿಎಂ ಕಿಸಾನ್ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯ

E-KYC Compulsory for PM Kisan Beneficiaries
ಬಾಗಲಕೋಟೆ : ಪಿ.ಎಂ.ಕಿಸಾನ್ ಯೋಜನೆಯಡಿ 13 ನೇ ಕಂತಿನ ಆರ್ಥಿಕ ನೇರವನ್ನು ವರ್ಗಾಯಿಸಲು ಕೇಂದ್ರ ಸರ್ಕಾರವು ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಹಾಗೆಯೇ ಈ ವರೆಗೆ ಅರ್ಜಿ ಸಲ್ಲಿಸದೇ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ಅರ್ಹ ಹೊಸ ಫಲಾನುಭವಿಗಳ ನೊಂದಣಿ ಮಾಡಿಸಲು ಅವಕಾಶವಿದ್ದು, ಅರ್ಹ ಫಲಾನುಭವಿಗಳು ನೊಂದಣಿ ಮಾಡಿಸಲು (ಜಂಟಿ ಖಾತೆದಾರರು, ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು, ಒಂದೇ ಕುಟುಂಬದ ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರಿಕರು ಹಾಗೂ ಮಾಹಿತಿಯ ಕೊರತೆಯಿಂದ ಮೇಲಿನ ಅರ್ಹ ಕಾರಣಗಳಿರುವ ಎಲ್ಲ ವರ್ಗದ ಕುಟುಂಬಗಳು) ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಭರ್ತಿ ಮಾಡಿ ಸಹಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರೈತ ಬಾಂಧವರು ಪಿ.ಎಂ.ಕಿಸಾನ ಯೋಜನೆಯಲ್ಲಿ ಮುಂದುವರೆಯಲು ತಮ್ಮ ಮೊಬೈಲ್ ಮುಖಾಂತರ ಆಧಾರ ನಂಬರ್ ನಮೂದಿಸಿ ಓ.ಟಿ.ಪಿ ದಾಖಲಿಸುವ ಮುಖಾಂತರ ಅಥವಾ ತಮ್ಮ ಸಮೀಪದ ಸಾಮೂಹಿಕ ಸೇವಾ ಕೇಂದ್ರ ಅಥವಾ ಗ್ರಾಮ್-1 ಸಾಮೂಹಿಕ ಕೇಂದ್ರಗಳಿಗೆ ಭೇಟಿ ನೀಡಿ ಪಿ.ಎಂ.ಕಿಸಾನ ಇ-ಕೆವೈಸಿ ಮಾಡಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a comment

Your email address will not be published. Required fields are marked *