Dark Light

Blog Post

Namma Bagalkot > News > Karnataka > Chief Ministers Amrit Jeevan Project: ಮುಖ್ಯಮಂತ್ರಿಗಳ ಅಮೃತ ಜೀವನದಡಿ ಅರ್ಜಿ

Chief Ministers Amrit Jeevan Project: ಮುಖ್ಯಮಂತ್ರಿಗಳ ಅಮೃತ ಜೀವನದಡಿ ಅರ್ಜಿ

Applications Invited for Animal Husbandry for Chief Ministers Amrit Jeevan Project

ಬಾಗಲಕೋಟೆ: ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶುಭಾಗ್ಯ ಫಲಾನುಭವಿಗಳ ಆಧಾರಿತ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಫಲಾನುಭವಿಗಳಿಗೆ ಹೈನುಗಾರಿಕೆ ಘಟಕ ಒಂದು ಮಿಶ್ರ ತಳಿ ಹಾಲು ಕರೆಯುವ ಹಸು, ಎಮ್ಮೆ ಇದ್ದು, ಘಟಕದ ಮೊತ್ತ 62 ಸಾವಿರ ರೂ.ಆಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 20655 ರೂ. ಹಾಗೂ ಸಾಮಾನ್ಯ ಫಲಾನುಭವಿಗಳಿಗೆ 15500 ರೂ.ಗಳ ಸಹಾಯಧನ ಒದಗಿಸಲಾಗುತ್ತದೆ. ಸಹಾಯಧನ ಹೊರತುಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿ ವಂತಿಕೆ, ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯಬೇಕು.

ಮಹಿಳೆಯರಿಗೆ ಶೇ33.3, ಅಲ್ಪಸಂಖ್ಯಾತರಿಗೆ ಶೇ.15, ವಿಶೇಷ ಚೇತನರಿಗೆ ಶೇ.3 ರಂತೆ ಆದ್ಯತೆ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಜನವರಿ 21 ರೊಳಗಾಗಿ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ ಸಲ್ಲಿಸುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Leave a comment

Your email address will not be published. Required fields are marked *