Dark Light

Blog Post

Namma Bagalkot > News > Jobs > Call to Safeguard Mines: ಗಣಿ ಸುರಕ್ಷತೆಗೆ ಆದ್ಯತೆ ನೀಡಲು ಪ್ರಭಾತಕುಮಾರ ಕರೆ

Call to Safeguard Mines: ಗಣಿ ಸುರಕ್ಷತೆಗೆ ಆದ್ಯತೆ ನೀಡಲು ಪ್ರಭಾತಕುಮಾರ ಕರೆ

Call to Safeguard Mines for Workers and Equipments
ಬಾಗಲಕೋಟೆ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುಮುಖ್ಯಪಾತ್ರವನ್ನು ವಹಿಸುವ ಗಣಿಗಾರಿಕೆಯ ಕಾರ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಕಾರ್ಮಿಕರ ಹಿತದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರೀಯೆಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಗಣಿ ಸುರಕ್ಷಣಾ ಮಹಾನಿರ್ದೇಶಕ ಪ್ರಭಾತಕುಮಾರ ಗಣಿಗಾರಿಕೆ ಕಂಪನಿಗಳಿಗೆ ಸೂಚನೆ ನೀಡಿದರು.
ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಇಂಜನೀಯರಿಂಗ್ ಕಾಲೇಜು ಸಭಾಭವನದಲ್ಲಿ ಗಣಿ ಸುರಕ್ಷಣಾ ಸಂಘ ಕರ್ನಾಟಕ ಹಾಗೂ ದೊಡ್ಡಣ್ಣವರ ಬ್ರದರ್ಸ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಣಿ ಸುರಕ್ಷಾ ಸಪ್ತಾಹ ವಲಯ-2 ರಾಜ್ಯಮಟ್ಟದ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಣಿಗಳಲ್ಲಿ ಗಣಿಗಾರಿಕೆ ಕೆಲಸ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳನ್ನು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿ ಕಾರ್ಯವನ್ನು ನಿರ್ವಹಿಸಬೇಕು. ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವುದು ಕಡ್ಡಾಯವಾಗಿದೆ. ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.
ದೊಡ್ಡಣ್ಣವರ ಬ್ರದರ್ಸ್ ಕಂಪನಿ ಮಾಲೀಕ ವಿನೋದ ಪಿ. ದೊಡ್ಡಣ್ಣವರ ಮಾತನಾಡಿ, ಪರಿಸರ ಹಾಗೂ ಮಾನವ ಸಂಪನ್ಮೂಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರೂಪಿಸಿದ ಗಣಿಗಾರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಗಣಿಗಾರಿಕೆ ಮಾಡುವುದು ಗಣಿಕಂಪನಿಗಳ ಕರ್ತವ್ಯವಾಗಿದೆ. ಅದರಂತೆ ನಮ್ಮ ಕಂಪನಿಯಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದರು.
ಡಾ.ಮೇದಾವೆಂಕಟಯ್ಯ ಮಾತನಾಡಿ, ಗಣಿ ಸುರಕ್ಷಣಾ ಸಂಘ ಕರ್ನಾಟಕವು 1968ರಲ್ಲಿ ಹಟ್ಟಿ ಚಿನ್ನದ ಗಣಿಯಲ್ಲಿ ಸ್ಥಾಪಿತವಾಗಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಾ 50 ವರ್ಷ ಪೂರೈಸಿದೆ. ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಸುರಕ್ಷತಾ ನಿಯಮಗಳನ್ನು ರೂಪಿಸುತ್ತಾ, ಶ್ರವಣ ಮಾಧ್ಯಮ ಹಾಗೂ ಪುಸ್ತಕ ರೂಪದಲ್ಲಿ ಸುರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.
ನಟರಾಜ ಕಲಾತಂಡದಿಂದ ಪ್ರಾರ್ಥನೆ ನಡೆಯಿತು. ದೊಡ್ಡಣ್ಣವರ ಬ್ರದರ್ಸ್ ಕಂಪನಿ ಉಪಾಧ್ಯಕ್ಷ ರಾಚಪ್ಪ ಸರಡಗಿ ಸ್ವಾಗತಿಸಿದರು. ಭರತ ನಿರೂಪಿಸಿದರು. ಅಮಿತ್ ಘೂಳಿ ವಂದಿಸಿದರು.
ಬಹುಮಾನ ವಿತರಣೆ: ಗಣಿ ಸುರಕ್ಷಣಾ ಸಪ್ತಾಹ ಹಿನ್ನಲೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಿಗೆ ಈ ಸಂದರ್ಭದಲ್ಲಿ ಆಕರ್ಷಕ ಬಹುಮಾನ ನೀಡಲಾಯಿತು.

Leave a comment

Your email address will not be published. Required fields are marked *